Showing posts with label purandara dAsa. Show all posts
Showing posts with label purandara dAsa. Show all posts

Monday, November 21, 2011

garvavyAtako ninage

ಗರ್ವವ್ಯಾತಕೋ ನಿನಗೆ ಪಾಮರ ಮನುಜ
ಧರೆಯೊಳಗೆ ಕುರುಪತಿಗೆ ಸರಿಯೆನ್ನಬಹುದೆ?

ಬಲದಲ್ಲಿ ಹಲಧರನೆ? ಛಲದಲ್ಲಿ ರಾವಣನೆ?
ಕುಲದಲ್ಲಿ ವಸಿಷ್ಠ ಗೌತಮನೇನೊ ನೀನು?
ನೆಲೆಯಲ್ಲಿ ಭೃಗು ಮುನಿಯೆ? ನೇಮದಲ್ಲಿ ಗಾಂಗೆಯನೆ?
ಒಲುಮೆಯಲಿ ವಾಲ್ಮಿಕಿ ಏನೋ ನೀನು?

ಹಠದಲ್ಲಿ ಪ್ರಹ್ಲಾದನೆ? ದೃಢದಲ್ಲಿ ಧೃವರಾಯನೆ?
ಷಠ್ಠರೊಳಗೆ ವಿಷ್ವಾಮಿತ್ರನು ಏನೊ ನೀನು?
ವಿಠ್ಠರೊಳಗೆ ಮನ್ಮಥನೆ? ವೀರರೊಳ್ ಪಾರ್ಥನೆ?
ಕುಟಿಲತನದಲ್ಲಿ ಶಕುನಿ ಏನು ನೀನು?

ದಾನದಲ್ಲಿ ಕರ್ಣನೆ? ಗಾನದಲ್ಲಿ ನಾರದನೆ?
ಜ್ಞಾನದಲ್ಲಿ ವ್ಯಾಸ ಶುಖ ಮುನಿ ಏನೊ ನೀನು?
ದೀನರಕ್ಷಕ ನಮ್ಮ ಪರಂದರ ವಿಠ್ಠಲನ
ಧ್ಯಾನದಲ್ಲಿ ಇದ್ದು ಭವ ನೀಗು ಮನುಜ!

- ಶ್ರೀ ಪುರಂದರ ದಾಸ